ಮಧುಮಿತಾ ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ವಿಜಯ್ ಟಿವಿಯಲ್ಲಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ಅವರು ಆಗಾಗ್ಗೆ ಹಾಸ್ಯ ಪಾತ್ರಗಳನ್ನು ಚಿತ್ರಿಸಿದ್ದು, ರಾಜೇಶ್ ಅವರ ಒರು ಕಲ್ ಒರು ಕನ್ನಡಿ (೨೦೧೨) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಲೊಲ್ಲು ಸಭಾ ಮತ್ತು ಕಲಕ್ಕಾ ಪೊವತು ಯಾರು? ಎಂಬ ಟಿವಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ೨೦೧೯ ರಲ್ಲಿ, ಅವರು ಬಿಗ್ ಬಾಸ್ ತಮಿಳು ೩ ರಲ್ಲಿ ಸ್ಪರ್ಧಿಯಾಗಿ ಇದ್ದರು ಮತ್ತು ೫೫ ನೇ ದಿನದಂದು ಹೊರಹಾಕಲ್ಪಟ್ಟರು. == ವೃತ್ತಿಜೀವನ == ಮಧುಮಿತಾರವರು ತಮ್ಮ ವೃತ್ತಿಜೀವನವನ್ನು ವಿಜಯ್ ಟಿವಿಯ ಲೊಲ್ಲು ಸಭಾದ ಹಾಸ್ಯ ಕಾರ್ಯಕ್ರಮದ ಮೂಲಕ ಪ್ರಾರಂಭಿಸಿದರು. ರಾಜೇಶ್ ಅವರ ಒರು ಕಲ್ ಒರು ಕನ್ನಡಿ (೨೦೧೨) ಅವರ ಮೊದಲ ಚಲನಚಿತ್ರವಾಗಿದ್ದು, ಇದರಲ್ಲಿ ಅವರು ಸಂತಾನಮ್ ಅವರೊಂದಿಗೆ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ಜಾಂಗಿರಿ ಪಾತ್ರವು ಅವರನ್ನು ಜನಪ್ರಿಯಗೊಳಿಸಿತು ಮತ್ತು ಅತ್ಯುತ್ತಮ ಮಹಿಳಾ ಹಾಸ್ಯನಟಿಗಾಗಿ ವಿಕಟನ್ ನಿಂದ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಂತರ, ಅವರು ಇದರ್ಕುತನೇ ಆಸೆಪಟ್ಟೈ ಬಾಲಕುಮಾರ (೨೦೧೩), ಜಿಲ್ಲಾ (೨೦೧೪), ಕಾಂಚನಾ ೨ (೨೦೧೫) ಮತ್ತು ವಿಶ್ವಾಸಂ (೨೦೧೯) ನಂತಹ ಹಲವಾರು ಚಿತ್ರಗಳಲ್ಲಿ ಪೋಷಕ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ೨೦೨೧ ರಲ್ಲಿ ಇಪಿಎಸ್‌ನಿಂದ ಕಲೈಮಾಮಣಿ ಪ್ರಶಸ್ತಿ ನೀಡಲಾಯಿತು. == ವೈಯಕ್ತಿಕ ಜೀವನ == ಮಧುಮಿತಾ ಅವರು ಎಐಎಡಿಎಂಕೆ ಕಾರ್ಯಕರ್ತ ವನ್ನೈ ಗೋವಿಂದನ್ ಅವರ ಪುತ್ರಿ. ಅವರು ತನ್ನ ಸೋದರಸಂಬಂಧಿ ಮೋಸೆಸ್ ಜೋಯಲ್ ಅವರನ್ನು ಫೆಬ್ರವರಿ ೨೦೧೯ ರಲ್ಲಿ ವಿವಾಹವಾದರು. == ಚಲನಚಿತ್ರಗಳು == === ದೂರದರ್ಶನ === == ಉಲ್ಲೇಖಗಳು == == ಬಾಹ್ಯ ಕೊಂಡಿ == ಐ ಎಮ್ ಡಿ ಬಿನಲ್ಲಿ